AAP ನ ಒಂದೊಂದೇ ಎಲೆಗಳು ಉದುರುತ್ತಿವೆ. ಅಶುತೋಶ್ ರಾಜೀನಾಮೆ ನಂತರ ಮತ್ತೊಬ್ಬ ನಂಬಿಕಸ್ಥ ನಾಯಕನ ರಾಜೀನಾಮೆ.

ಆಮ್ ಆದ್ಮಿ ಪಕ್ಷ ದೆಹಲಿಯಲ್ಲಿ ಭ್ರಷ್ಟಾಚಾರ ನಿರ್ಮೂಲನೆ ಮಾಡುತ್ತೇನೆ ಎಂದು ಅರವಿಂದ ಕೇಜ್ರೀವಾಲ್ ನೇತೃತ್ವದಲ್ಲಿ ಎಲ್ಲಾ ದೊಡ್ಡ ಪಕ್ಷಗಳನ್ನು ಸೋಲಿಸಿ ಅಧಿಕಾರಕ್ಕೆ ಬಂದಂತಹದು. ಅಧಿಕಾರಕ್ಕೆ ಬಂದ ನಂತರದಲ್ಲಿ ನಡೆದ ಭ್ರಷ್ಟಾಚಾರ ದೇಶದ ಎಲ್ಲಾ ಕಡೆಯಿಂದ ಟೀಕೆಗಳಿಗೆ ಗುರಿಯಾಗಿತ್ತು. ದೇಶದ ಎಲ್ಲಾ ರಾಜ್ಯಗಳ ಚುನಾವಣೆಯಲ್ಲಿ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಹೀನಾಯವಾಗಿ ಸೋಲನ್ನು ಅನುಭವಿಸಿದ ಪಕ್ಷ ಆಮ್ ಆದ್ಮಿ ಪಕ್ಷ.

ಮೋದಿ ಹಾಗೂ ದೆಹಲಿಯ ರಾಜ್ಯಪಾಲರ ವಿರುದ್ದ ಯಾವಾಗಲೂ ದ್ವೇಷ ಹಾಗೂ ದೂರು ನೀಡುತ್ತಾ ಕಾಲ ಕಳೆಯುತ್ತಿದ್ದ ಕೇಜ್ರೀವಾಲ್ ತನ್ನ ಪಕ್ಷದ ನಾಯಕರು ಮಾಡಿದ ಭ್ರಷ್ಟಾಚಾರದ ಬಗ್ಗೆ ಮೌನ ವಹಿಸಿದ್ದರು. ಕೆಲವು ನಾಯಕರು ಜೈಲಿಗೆ ಹೋದರು, ಕೆಲವರು ಅಮಾನತುಗೊಂಡಿದ್ದಾರೆ. ಇದೀಗ ಮಾಜಿ ಪತ್ರಕರ್ತ ಅಶುತೋಷ್ ರಾಜೀನಾಮೆ ನೀಡಿದ ಬೆನ್ನಲ್ಲೇ ಇನ್ನೊಬ್ಬ ನಾಯಕ ಪಕ್ಷಕ್ಕೆ ರಾಜೀನಾಮೆ ನೀಡಿ ಹೊರನಡೆದಿದ್ದಾರೆ.

ಅಶೀಶ್ ಕೇತನ ಮೊದಲು ವಕೀಲ ವೃತ್ತಿ ಮಾಡುತ್ತಿದ್ದರು, ನಂತರ ಆಮ್ ಆದ್ಮಿ ಪಕ್ಷದ ಮೂಲಕ ಸ್ಪರ್ಧಿಸಿ ಗೆದ್ದು ರಾಜಕೀಯದಲ್ಲಿ ತೊಡಗಿಕೊಂಡಿದ್ದರು. ಇದೀಗ ತಮ್ಮ ಸ್ವ ಕಾರಣ ಹೇಳಿ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ತಮ್ಮ ವಕೀಲ ವೃತ್ತಿ ಮುಂದುವರಿಸುವ ಕಾರಣಕ್ಕೆ ನಾನು ರಾಜಕೀಯಕ್ಕೆ ರಾಜೀನಾಮೆ ನೀಡಲಿದ್ದೇನೆ ಎಂದು ಹೇಳಿದ್ದಾರೆ.

ಇದಕ್ಕಿಂತ ಮೊದಲು ಕಪಿಲ್ ಮಿಶ್ರಾ ರಾಜೀನಾಮೆ ನೀಡಿ ಕೇಜ್ರೀವಾಲ್ ಹಾಗೂ ಆಮ್ ಆದ್ಮಿ ಪಕ್ಷವನ್ನು ಸರಿಯಾಗಿ ಬಾರಿಸುತ್ತಿದ್ದಾರೆ. ಈಗ ಈ ಎರಡು ನಾಯಕರ ರಾಜೀನಾಮೆ ಕೇಜ್ರೀವಾಲ್ ಕೈ ಮುರಿದಂತಾಗಿದೆ. ಅರವಿಂದ ಕೇಜ್ರೀವಾಲ್ ಇನ್ನೂ ಈ ಇಬ್ಬರ ರಾಜೀನಾಮೆ ಸ್ವೀಕರಿಸಿಲ್ಲ.

Leave a comment

Be the first to comment