6 ಕಾರಣ ಇನ್ನೊಂದು ಕ್ವಿಟ್ ಇಂಡಿಯಾ ಚಳುವಳಿಗೆ. ಈ ಬಾರಿ ಓಡಿಸುತ್ತಿರುವುದು ಬಾಂಗ್ಲಾದೇಶ ಹಾಗೂ ರೋಹಿಂಗ್ಯಾಗಳನ್ನು.

ರಾಜಕೀಯ ಹಾಗೂ ಆಂತರಿಕ ಭಿನ್ನಾಭಿಪ್ರಾಯ ಬಿಟ್ಟು ಎಲ್ಲಾ ರಾಜಕೀಯ ನಾಯಕರು ಹಾಗೂ ರಾಜಕೀಯ ಪಕ್ಷಗಳು ಒಟ್ಟು ಸೇರಿ ಇನ್ನೊಮ್ಮೆ ಕ್ವಿಟ್ ಇಂಡಿಯಾ ಚಳುವಳಿ ಶುರು ಮಾಡಬೇಕಿದೆ ಆದರೆ ಈ ಬಾರಿ ಭಾರತ ಬಿಡುವವರು ಇಂಗ್ಲಿಷರಲ್ಲ ಬದಲಾಗಿ ಬಾಂಗ್ಲಾದೇಶ ಹಾಗೂ ರೋಹಿಂಗ್ಯಾ ಅಕ್ರಮ ವಲಸಿಗರು. ಯಾಕೆ ಇನ್ನೊಮ್ಮೆ ಭಾರತ ಬಿಟ್ಟು ತೊಲಗಿ ಚಳುವಳಿ ಶುರುವಾಗಬೇಕಿದೆ? ಇಲ್ಲಿದೆ ಆ ೬ ಅಂಶಗಳು.

ಅಸ್ಸಾಂನಲ್ಲಿ NRC ಅಂದರೆ ಅಕ್ರಮ ವಲಸಿಗರ ರಿಜಿಸ್ಟರ್ ನಂತರ ದೇಶದ ಎಲ್ಲಾ ಕಡೆಗಳಲ್ಲೂ ಈ ತರದ ರಿಜಿಸ್ಟರ್ ಅನ್ನು ಜಾರಿಗೆ ತರಬೇಕಾಗಿದೆ ಹಾಗೂ ಅಕ್ರಮ ವಲಸಿಗರನ್ನು ದೇಶದಿಂದ ಒದ್ದೋಡಿಸಬೇಕಾಗಿದೆ.

ಭಾರತ ನಮ್ಮ ನೆರೆಯ ರಾಷ್ಟ್ರಗಳಾದ ಬಾಂಗ್ಲಾದೇಶ ಹಾಗೂ ಮಯನ್ಮಾರ್ ಗಳ ವಿರುದ್ದ ಯಾವುದೇ ದ್ವೇಷವಿಲ್ಲ. ನಾವೂ ಅಲ್ಲಿನ ಪ್ರತಿಭೆಗಳನ್ನು ಜನರನ್ನು ಗೌರವಿಸುತ್ತೇವೆ ಹಾಗು ಭಾರತದ ಪೌರತ್ವವನ್ನೂ ನೀಡುತ್ತೇವೆ ಅದನ್ನು ಸರಿಯಾದ ರೀತಿಯಲ್ಲಿ ಪಡೆದರೆ ಮಾತ್ರ.

ಅಲ್ಲಿಯವರೆಗೆ ಭಾರತ ಹಾಗೂ ಭಾರತೀಯರು ಮತ್ತೊಮ್ಮೆ ಕ್ವಿಟ್ ಇಂಡಿಯಾ ಚಳುವಳಿ ಶುರು ಮಾಡಬೇಕಿದೆ. ಕಾರಣವೇನು? ಇಲ್ಲಿದೆ ನೋಡಿ ಆ ಆರು ಅಂಶಗಳು.

ಭಾರತದ ಸಂಪನ್ಮೂಲಗಳ ಸ್ವಾಧೀನ

ದೇಶದಲ್ಲಿ ಈಗಾಗಲೇ ಸುಮಾರು ೨ ಕೋಟಿ ಅಕ್ರಮ ಬಾಂಗ್ಲಾದೇಶಿ ಮುಸಲ್ಮಾನರಿದ್ದಾರೆ ಇದು ಕಳೆದ ವರ್ಷ ರಾಜ್ಯ ಸಭೆಯಲ್ಲಿ ಮಂಡಿಸಿದ ವರದಿ ಪ್ರಕಾರವಾಗಿದೆ. ಇದು ನಮ್ಮ ದೇಶದ ರಾಜಧಾನಿಯ ಜನಸಂಖ್ಯೆಗಿಂತಲೂ ಜಾಸ್ತಿಯಾಗಿದೆ.

ಇದರ ಜೊತೆಗೆ ಲೆಕ್ಕ ಹಾಕಲಾಗಿರುವ ೪೦,೦೦೦ ಅಕ್ರಮ ರೋಹಿಂಗ್ಯಾ ಮುಸ್ಲಿಮರು. ಲೆಕ್ಕ ಹಾಕದೇ ಇನ್ನು ಇದಕ್ಕಿಂತ ಜಾಸ್ತಿ ಇದೆ.

ದೇಶದ per capita income‌ ಇನ್ನೂ ಕೇವಲ $೨,೦೦೦ ಅಂದರೆ ೧,೩೭,೦೦೦/ವರ್ಷ. ದೇಶ ವೇಗವಾಗಿ ಅಭಿವೃದ್ಧಿ ಹೊಂದಿರುವ ದೇಶ ಹಾಗೂ ೭.೫% ವೇಗದಲ್ಲಿ ಅಭಿವೃದ್ಧಿ ಹೊಂದುತ್ತಿರುವ ದೇಶವಾದರೂ ನಮ್ಮ ದೇಶದ ಬಡವರನ್ನು ಕಡೆಗಣಿಸಿ ಅಕ್ರಮ ವಲಸಿಗರಿಗೆ ಮನೆ, ಕೆಲಸ ಕೊಡಿಸುವುದು ಅಸಾಧ್ಯ. ಫೇಕ್ ರೇಷನ್ ಕಾರ್ಡ್ ಹಾಗೂ ಆಧಾರ್ ಬಳಸಿ ನಮ್ಮ ದೇಶದ ಜನರಿಗೆ ಮೋಸ ಮಾಡಿ ಮೂಲಭೂತ ಸೌಲಭ್ಯ ಬಳಸುವುದು ದೇಶದ ಅಭಿವೃದ್ಧಿಗೆ ಮಾರಕ.

ರಾಷ್ಟ್ರೀಯ ಭದ್ರತೆ.

ಬುದವಾರ ರಾತ್ರಿ ಜಮ್ಮು ಕಾಶ್ಮೀರದಲ್ಲಿ ಪೋಲಿಸರು ಮೂವರು ರೋಹಿಂಗ್ಯಾ ಮುಸ್ಲಿಮರನ್ನು ಸುಮಾರು ೩೦ ಲಕ್ಷ ರೂಪಾಯಿಗಳೊಂದಿಗೆ ಬಂಧಿಸಿದ್ದಾರೆ. ತಮ್ಮ ದೇಶಗಳಿಂದ ಓಡಿಬಂದು ನಮ್ಮ ದೇಶದಲ್ಲಿ ಬಂದು ಅಕ್ರಮವಾಗಿ ನೆಲೆಸಿರುವವರಿಗೆ ೩೦ ಲಕ್ಷ ಹಣ ಎಲ್ಲಿಂದ ಬಂತು ಎನ್ನುವುದು ಸಾಮಾನ್ಯವಾಗಿ ಬರುವಂತಹ ಪ್ರಶ್ನೆ.

ಭಾರತೀಯ ಸುರಕ್ಷಾ ದಳಗಳು ನಿರಂತರವಾಗಿ ಈ ರೋಹಿಂಗ್ಯಾಗಳು ಪಾಕಿಸ್ತಾನದ ಅಲ್ಕೈದಾ ಹಾಗೂ ಹಫೀಝ್ ಸೈಯದ್ ಗೆ ಕೆಲಸ ಮಾಡುತ್ತಿದ್ದಾರೆ ಹಾಗೂ ದೇಶದ ಭದ್ರತೆಗೆ ತೊಡಕಾಗಿದ್ದಾರೆ ಎಂದು ಎಚ್ಚರಿಸುತ್ತಾ ಬಂದಿದ್ದಾರೆ. ಬಾಂಗ್ಲಾದೇಶದ ಜಮ್ಮತ್-ಅಲ್-ಮುಜಾಯಿದ್ದೀನ್ ಭಾರತ ಹಾಗೂ ಬಾಂಗ್ಲಾದೇಶದ ಗಡಿಯಲ್ಲಿ ದೇಶ ವಿರೋಧಿ ಕೆಲಸ ಮಾಡುತ್ತದೆ.

ಇತ್ತೀಚಿನ ವರದಿ ಪ್ರಕಾರ ಸಾಮ್ಯುನ್ ರಹಮಾನ್ ಬ್ರಿಟಿಷ್ ಮೂಲದ ರೋಹಿಂಗ್ಯಾ ಉಗ್ರ ಸಿರಿಯಾದಲ್ಲಿ ಐಸಿಸ್ ಗಾಗಿ ಕೆಲಸ ಮಾಡುತ್ತಿದ್ದ ಹಾಗೂ ಬಾಂಗ್ಲಾದೇಶದ ಚಿತ್ತಗಾಂಗ್ ಮೂಲಕ ಭಾರತ ಪ್ರವೇಶಿಸಿ ಮಿಜೋರಾಮ್ ಅಲ್ಲಿ ಬಂದಿತನಾದ. ಇವನ ಮುಖ್ಯ ಉದ್ದೇಶ ರೋಹಿಂಗ್ಯಾಗಳು ಇರುವ ಜಾಗದಲ್ಲಿ ದೇಶ ವಿರೋಧಿ ಚಟುವಟಿಕೆ ನಡೆಸುವುದು ಮುಖ್ಯ ಉದ್ದೇಶವಾಗಿತ್ತು.

ಬೌಗೋಳಿಕ ಬದಲಾವಣೆ

ಮೊದಲು ಪಾಕಿಸ್ತಾನ ನಂತರ ಬಾಂಗ್ಲಾದೇಶ ಭಾರತದಿಂದ ಬೇರ್ಪಟ್ಟಿತು. ಮುಸ್ಲಿಂ ರಾಷ್ಟ್ರವಾಗಿ ಮಾರ್ಪಾಡಾಯಿತು. ಭಾರತ ಇನ್ನೊಂದು ಬಾರಿ ಜಾತ್ಯಾತೀತ ಎಂದು ಭಾರತವನ್ನು ಒಡೆಯಲು ಸಿದ್ದವಿಲ್ಲ. ಪಶ್ಚಿಮ ಬಂಗಾಳದ ಮುಸ್ಲಿಮರ ಸಂಖ್ಯೆ ಹನ್ನೆರಡು ಪ್ರತಿಶತದಿಂದ ೨೭% ಕ್ಕೆ ತಲುಪಿದೆ. ಅಸ್ಸಾಂ ಕೂಡಾ ಇದೇ ರೀತಿ ಬೌಗೋಳಿಕ ಬದಲಾವಣೆ ಆಗುತ್ತಿದೆ. NRC ಇಂದ ಇದೆಲ್ಲವೂ ಬದಲಾಗಿದೆ.

ಭಾರತೀಯ ಸಂಸ್ಕೃತಿಯ ನಾಶ

ಬೌಗೋಳಿಕ ಬದಲಾವಣೆ ಹಾಗೂ ಧರ್ಮಗಳ ಅಳಿವು ಆಗುವ ಸಮಯದಲ್ಲಿ ಅಲ್ಲಿನ ಮೂಲ ಸಂಸ್ಕೃತಿ ಹಾಗೂ ಪದ್ದತಿಗಳ ನಾಶವಾಗುತ್ತದೆ. ಇರಾಕ್, ಇರಾನ್ ದೇಶಗಳೇ ಇದಕ್ಕೆ ಉದಾಹರಣೆಯಾಗಿದೆ. ಬಂಗಾಳದ ಮರ್ಶಿದಾಬಾದ ಅಲ್ಲಿ ಮುಸಲ್ಮಾನರ ಸಂಖ್ಯೆ ೬೪% ಆದದ್ದೇ ತಡ ಹುಡುಗಿಯರು ಶಾರ್ಟ್ ದರಿಸಿ ಪುಟ್ಬಾಲ್ ಆಡಬಾರದೆಂದು ಫತ್ವಾ ಹೊರಡಿಸಿದರು.

ಹಿಂದಿನಿಂದಲೂ ನಡೆದುಕೊಂಡು ಬಂದಿದ್ದ ದುರ್ಗಾ ಪೂಜೆ ನಡೆಸಲು ವಿರೋಧ ಹಾಗೂ ಶಾಲೆಗಳಲ್ಲಿ ಹಿಂದಿನಿಂದ ನಡೆದು ಬಂದಿದ್ದ ಸರಸ್ವತಿ ಪೂಜೆಯ ನಿಷೇದ ಇದಕ್ಕೆಲ್ಲ ಕಾರಣ.

ಗೋಕಳ್ಳತನ

ಎಡಪಂಥೀಯರು ಹಾಗೂ ಬುದ್ದಿಜೀವಿಗಳು ಗೋರಕ್ಷಕರು ಗೋಕಳ್ಳರನ್ನು ಹೊಡೆದರೆ ಉಗ್ರರು ಎಂದು ಬಿಂಬಿಸುತ್ತಾರೆ ಆದರೆ ಅದೇ ಮುಸಲ್ಮಾನರು ಗೋವುಗಳನ್ನು ಕಳ್ಳತನ ಮಾಡಿ ತಡೆಯಲು ಬಂದವರನ್ನು ಕೊಂದು ಹೋಗುವಾಗ ಯಾವ ಬುದ್ದಿಜೀವಿಗಳೂ, ಎಡಪಂಥೀಯರೂ ಜನರಿಗೆ ತಿಳಿಸುವುದಿಲ್ಲ. ಬಾಂಗ್ಲಾದೇಶ ಗಡಿಯಲ್ಲಿ ಎಗ್ಗಿಲ್ಲದೆ ಕಳ್ಳ ತನದಿಂದ ಗೋಸಾಗಾಣಿಕೆ ನಡೆಯುತ್ತಿತ್ತು. ಎರಡು ವರ್ಷಗಳಿಂದ ಕೇಂದ್ರ ಸರ್ಕಾರದ ಕಠಿಣ ಕ್ರಮಗಳಿಂದ ಇದು ಸ್ವಲ್ಪ ಕಡಿಮೆಯಾಗಿದೆ ಆದರೂ ಬಿ ಎಸ್ ಎಫ್ ಸೈನಿಕರನ್ನು ಕೊಂದು ಈ ಗೋಸಾಗಾಣಿಕೆ ಮಾಡಲಾಗುತ್ತಿದೆ.

ಬಡ ಭಾರತೀಯರಿಗೆ ಗೋವು ಈ ಜೀವ ವಿಮೆಯ ತರಹ. ತಮ್ಮ ಫಸಲು ಬರದೇ ಇದ್ದಾಗ ಈ ಗೋಕಳ್ಳರಿಗೆ ಹೆದರಿ ತಮ್ಮ ಧರ್ಮವನ್ನುಹ ಮರೆತು ಗೋವುಗಳನ್ನು ತಮ್ಮ ಜೀವ ಉಳಿಸಿಕೊಳ್ಳಲು ಕೊಟ್ಟುಬಿಡುತ್ತಾರೆ.

ಮೋದಿ ವಿರೋಧಿ ಪಕ್ಷಗಳು ಗೋರಕ್ಷಕರ ಸಾವನ್ನು ಎಲ್ಲೂ ಯಾವತ್ತೂ ಹೇಳುವುದಿಲ್ಲ. ಬಂಗಾಳದಲ್ಲಿ ಐದಕ್ಕೆ ಒಂಬತ್ತು ಗೋರಕ್ಷಕರ ಕೊಲೆ ನಡೆದಿತ್ತು. ಅದು ಕಳೆದ‌ ವರ್ಷದ ಲೆಕ್ಕಚಾರವಾಗಿತ್ತು.

ವೋಟ್ ಬ್ಯಾಂಕ್ ರಾಜಕೀಯ

ಜಾತ್ಯಾತೀತ ಮುಖವಾಡ ಹೊತ್ತಿಕೊಂಡು ವರ್ಷಗಳಿಂದ ದೇಶವನ್ನು ಆಳಿಕೊಂಡು ಬರುತ್ತಿದ್ದವರಿಗೆ ನಾಲ್ಕು ವರ್ಷಗಳಿಂದ ಹಲವಾರು ರಾಜ್ಯಗಳು ಕೈತಪ್ಪಿದೆ. ಇದರಿಂದ ತಮ್ಮ ವೋಟ್ ಬ್ಯಾಂಕ್ ಭದ್ರ ಪಡಿಸಿಕೊಳ್ಳಲು ಅಕ್ರಮ ವಲಸಿಗಾರರನ್ನು ದೇಶದಲ್ಲಿ ಉಳಿಸಿಕೊಳ್ಳಲು ಶತ ಪ್ರಯತ್ನ ಮಾಡುತ್ತಿದೆ. ಬಂಗಾಳದಲ್ಲಿ ಶಿಕ್ಷಣ ಇಲಾಖೆ ಎಷ್ಟು ಹೆದರಿದೆ ಎಂದರೆ ಕಾಮನಬಿಲ್ಲು ನ್ನು ಅಲ್ಲಿನ ಪ್ರಾದೇಶಿಕ ಭಾಷೆಯಲ್ಲಿ ರಾಮದೋನು ಅಂದು ಕರೆಯುತ್ತಿದ್ದರು. ಇದರಲ್ಲಿ ರಾಮ ಎಂದು ಇರುವುದರಿಂದ ಎಲ್ಲಿ ಮುಸಲ್ಮಾನರಿಗೆ ಬೇಸರವಾಗುವುದೋ ಎಂದು ರಾಮದೋನು ಎಂಬುದನ್ನು ರೋಂಗುದೋನು ಎಂದು ಪಠ್ಯದಲ್ಲಿ ಬದಲಾವಣೆ ಮಾಡಿದರು.

ಅತಿಥಿ ದೇವೋ ಭವ ಎಂಬುದು ನಾವು ಮೊದಲಿನಿಂದಲೂ ಪಾಲಿಸಿ ಬಂದಂತಹ ಸಂಪ್ರದಾಯವಾದರೂ ನಮ್ಮ ದೇಶದ ಮೇಲೆ‌ ಇತರರ ದೇಶಗಳಿಂದ ದಾಳಿಯಾದಗ ಅವರನ್ನು ಓಡಿಸುವುದು ನಮ್ಮ ಮೊದಲ ಆದ್ಯತೆಯಾಗಬೇಕಾಗಿದೆ.

Leave a comment

Be the first to comment