ಸ್ವಾತಂತ್ರ್ಯ ದಿನಾಚರಣೆಗಾಗಿ ವಿರಾಟ್ ಕೊಹ್ಲಿಯಿಂದ ಹೊಸ ಚಾಲೆಂಜ್

ಕಿಕಿ ಚಾಲೆಂಜ್ ಬಳಿಕ ಇದೀಗ ಹೊಸ ಚಾಲೆಂಜ್ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಆಗುತ್ತಿದೆ. ಹೊಸ ಚಾಲೆಂಜ್ ಹಾಕಿರೋದು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ. ಕೊಹ್ಲಿಯ ವೇಷಭೂಷ ಚಾಲೆಂಜ್ ಏನು? ಇಲ್ಲಿದೆ ವಿವರ.

ಸಾಮಾಜಿಕ ಜಾಲತಾಣದಲ್ಲಿ ಚಾಲೆಂಜ್ ನೀಡೋದು, ಚಾಲೆಂಜ್ ಸ್ವೀಕರಿಸೋದು ಇದೀಗ ಜನಪ್ರಿಯವಾಗಿದೆ. ಇತ್ತೀಚೆಗಷ್ಟೇ ಕಿಕಿ ಚಾಲೆಂಜ್ ವಿವಾದಕ್ಕೂ ಕಾರಣವಾಗಿತ್ತು. ಇದೀಗ ಇಂಗ್ಲೆಂಡ್ ಪ್ರವಾಸದಲ್ಲಿರುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸಾಮಾಜಿಕ ಜಾಲತಾಣದಲ್ಲಿ ಹೊಸ ಚಾಲೆಂಜ್ ಹಾಕಿದ್ದಾರೆ.

ಭಾರತದ 72ನೇ ಸ್ವಾತಂತ್ರ್ಯ ದಿನಾಚರಣೆಗಾಗಿ ವಿರಾಟ್ ಕೊಹ್ಲಿ ವೇಷಭೂಷ ಸವಾಲು ಹಾಕಿದ್ದಾರೆ.  ಸಾಂಪ್ರದಾಯಿಕ ಉಡುಗೆ ಧರಿಸಿ ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮಾಚರಣೆ ಮಾಡಿ ಎಂದು ಕೊಹ್ಲಿ ಚಾಲೆಂಜ್ ಮಾಡಿದ್ದಾರೆ.

 

 

News Source

Leave a comment

Be the first to comment