ವಿಶೇಷ ಅತಿಥಿಗಳ ಜೊತೆ ಗೌತಮ್ ಗಂಭೀರ್ ರಕ್ಷಾ ಬಂಧನ

ದೇಶೆದೆಲ್ಲೆಡೆ ಇಂದು ರಕ್ಷ ಬಂಧನ ಹಬ್ಬವನ್ನ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಟೀಂ ಇಂಡಿಯಾ ಕ್ರಿಕೆಟಿಗ ಗೌತಮ್ ಗಂಭೀರ್ ರಕ್ಷಾ ಬಂಧನ ಹಬ್ಬವನ್ನ ವಿಶೇಷ ಅತಿಥಿಗಳ ಜೊತೆ ಆಚರಿಸಿಕೊಂಡರು.

ತೃತೀಯ ಲಿಂಗಳ ಕೈಯಿಂದ ರಾಖಿ ಕಟ್ಟಿಸಿಕೊಂಡ ಗೌತಮ್ ಗಂಭೀರ್ ಸಂದೇಶವನ್ನೂ ರವಾನಿಸಿದ್ದಾರೆ. ತೃತೀಯ ಲಿಂಗಿಗಳಾದ ಅಭಿನಾ ಅಹೆರ್ ಹಾಗೂ ಸಿಮ್ರಾನ್ ಶೇಖ್ ಜೊತೆ ಗಂಭೀರ್ ರಕ್ಷಾ ಬಂಧನ ಹಬ್ಬ ಆಚರಿಸಿಕೊಂಡಿದ್ದಾರೆ.

ತೃತೀಯ ಲಿಂಗಿಗಳಿಂದ ರಾಖಿ ಕಟ್ಟಿಸಿಕೊಂಡ ಗೌತಮ್ ಗಂಭೀರ್, ನಾನು ತಂಗಿಯಾಗಿ ಇವರನ್ನ ಸ್ವೀಕರಿಸಿದ್ದೇನೆ. ನೀವು? ಎಂದು ಪ್ರಶ್ನಿಸಿದ್ದಾರೆ. ಒಟ್ನಲ್ಲಿ ಪ್ರತಿ ಹಬ್ಬ, ವಿಶೇಷ ದಿನಗಳನ್ನ ಅರ್ಥಪೂರ್ಣವಾಗಿ ಆಚರಿಸುವ ಗೌತಮ್ ಗಂಭೀರಿ ಇದೀಗ ಮತ್ತೆ ಎಲ್ಲರಿಗೂ ಮಾದರಿಯಾಗಿದ್ದಾರೆ.

Leave a comment

Be the first to comment