ತ್ರಿವಳಿ ತಲಾಖ್ ವಿರುದ್ಧ ಹೋರಾಟ ನಡೆಸಿದ್ದ ನಿದಾ ಖಾನ್ ಶೀಘ್ರದಲ್ಲೇ ಬಿಜೆಪಿಗೆ ಸೇರ್ಪಡೆ!

ತ್ರಿವಳಿ ತಲಾಖ್ ಮತ್ತು ಹಲಾಲಾ ಪದ್ಧತಿಗಳ ವಿರುದ್ಧ ಧ್ವನಿಯೆತ್ತಿರುವ ನಿದಾ ಖಾನ್ ಇದೀಗ ತಾವು ಬಿಜೆಪಿಗೆ ಸೇರ್ಪಡೆಯಾಗುವುದಾಗಿ ಹೇಳಿದ್ದಾರೆ.
ಬಿಜೆಪಿಗೆ ಸೇರ್ಪಡೆಯಾಗಿ ತ್ರಿವಳಿ ತಲಾಖ್ ಮತ್ತು ಹಲಾಲಾ ಪದ್ಧತಿಗಳ ವಿರುದ್ಧ ಹೋರಾಡುವುದಾಗಿ ನಿದಾ ಖಾನ್ ಹೇಳಿದ್ದಾರೆ. 24 ವರ್ಷದ ನಿದಾ ಖಾನ್ ತ್ರಿವಳಿ ತಲಾಖ್ ನ ಸಂತ್ರಸ್ತ ಮಹಿಳೆಯರಿಗಾಗಿ ಎನ್ಜಿಒವನ್ನು ನಡೆಸುತ್ತಿದ್ದಾರೆ. ತ್ರಿವಳಿ ತಲಾಖ್ ವಿರುದ್ಧ ಧ್ವನಿ ಎತ್ತಿದ್ದರಿಂದ ದರ್ಗಾ ಅಲಾ ಹರ್ಝತ್ ನಿಖಾ ವಿರುದ್ಧ ಫತ್ವಾ ಹೊರಡಿಸಿದ್ದು ದೇಶಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿತ್ತು.
ಬಿಜೆಪಿಗೆ ಸೇರ್ಪಡೆಯಾಗಿ ತ್ರಿವಳಿ ತಲಾಖ್, ಹಲಾಲ್ ಪದ್ಧತಿಗಳ ವಿರುದ್ಧ ರಾಷ್ಟ್ರ ಮಟ್ಟದಲ್ಲಿ ಹೋರಾಟ ನಡೆಸುತ್ತೇನೆ, ಇನ್ನು ಬಿಜೆಪಿ ಪಕ್ಷಕ್ಕೆ ಸೇರ್ಪಡೆ ಕುರಿತಂತೆ ಯಾವಾಗ, ಯಾವ ಸ್ಥಳದಲ್ಲಿ ಕಾರ್ಯಕ್ರಮ ನಡೆಯುತ್ತದೆ ಎಂಬುದನ್ನು ಪಕ್ಷ ಇನ್ನು ತಿಳಿಸಿಲ್ಲ ಎಂದು ನಿದಾ ಖಾನ್ ಹೇಳಿದ್ದಾರೆ.
ಉತ್ತರಖಂಡದ ಮಹಿಳಾ ಮತ್ತು ಮಕ್ಕಳ ಕಲ್ಯಾಣಾಭಿವೃದ್ಧಿ ಸಚಿವೆ ರೇಖಾ ಆರ್ಯಾ ಅವರು ನಿದಾ ಖಾನ್ ರನ್ನು ಭೇಟಿಯಾಗಿ ಪಕ್ಷಕ್ಕೆ ಸೇರುವಂತೆ ಸಲಹೆ ನೀಡಿದ್ದರು.

ನಿದಾ ಖಾನ್ ಸಹ ತ್ರಿವಳಿ ತಲಾಖ್ ಸಂತ್ರಸ್ತೆಯಾಗಿದ್ದು ಪತಿ ಶಿರೇನ್ ಆಕೆಗೆ ತಲಾಖ್ ನೀಡಿದ್ದರು. ಇದರ ವಿರುದ್ಧ ಹೋರಾಟ ನಡೆಸಿದ್ದ ನಿದಾ ಖಾನ್ ಗೆ ಭಾರೀ ಬೆಂಬಲ ಸಿಕ್ಕಿತ್ತು. ಅಲ್ಲದೆ ಬರೇಲಿಯ ಕೋರ್ಟ್ ನಿದಾ ಖಾನ್ ಗೆ ನೀಡಲಾಗಿರುವ ತ್ರಿವಳಿ ತಲಾಖ್ ಅಸಿಂಧುವೆಂದು ಘೋಷಿಸಿತ್ತು.

News Source

Leave a comment

Be the first to comment