ಜಮ್ಮು ಕಾಶ್ಮೀರದಲ್ಲಿ ಸೇನೆಯ ಮೇಲೆ ಕಲ್ಲು ಹೊಡೆಯುವವರು ಇಸ್ಲಾಂ ವಿರೋಧಿಗಳು – ಅಜ್ಮೀರ್ ದರ್ಗಾ ಮುಖ್ಯಸ್ಥ.

ಕಣಿವೆ ರಾಜ್ಯದಲ್ಲಿ ಭಾರತೀಯ ಸೇನೆಯ ಮೇಲೆ ಕಲ್ಲು ಹೊಡೆಯುವವರ ವಿರುದ್ದ ಕಟುವಾಗಿ ಟೀಕಿಸಿದ ಅಜ್ಮೀರ್ ದರ್ಗಾದ ಮುಖ್ಯಸ್ಥ ಸೂಫೀ ಸಂತ ಖ್ವಾಜಾ ಮೊಯ್ಯ್ನುದ್ದೀನ್ ಚಸ್ತಿ ಸೇನೆಯ ಮೇಲೆ ಕಲ್ಲು ತರುವವರು ಮುಸಲ್ಮಾನರಲ್ಲ ಅವರು ಇಸ್ಲಾಂ ವಿರೋಧಿಗಳು ಎಂದು ಒಂದು ಸಂದರ್ಶನದಲ್ಲಿ ಹೇಳಿದ್ದಾರೆ. ಈ ಹಬ್ಬದ ಸಂಧರ್ಭದಲ್ಲಿ ಸೇನೆ ಮೇಲೆ ಕಲ್ಲು ತೂರುವ ಮೂಲಕ ಇಸ್ಲಾಂ ಮತದ ಮೇಲೆ ಕೆಟ್ಟ ಹೆಸರು ಬರುವಂತೆ ಮಾಡುದ್ದಾರೆ ಎಂದೂ ತಮ್ಮ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಇತ್ತೀಚೆಗೆ ಈದ್ ದಿನಗಳಲ್ಲಿ ಕಾಶ್ಮೀರದಲ್ಲಿ ಸೇನೆ ಮೇಲೆ ಕಲ್ಲು ತೂರುವುದು ಹೆಚ್ಚಾಗಿತ್ತು ಹಾಗೆಯೆ ಪಾಕಿಸ್ತಾನ ಹಾಗೂ ಐಸಿಸ್ ಧ್ವಜ ಕೂಡಾ ಹಾರಿಸಲಾಗಿತ್ತು. ಇದರ ನಡುವೆ ಬಿಜೆಪಿ ಕಾರ್ಯಕರ್ತನ ಕೊಲೆ ಹಾಗೂ ಇಬ್ಬರು ಪೋಲಿಸರ ಹತ್ಯೆ ಮಾಡಲಾಗಿತ್ತು.

Leave a comment

Be the first to comment