ತನ್ನ ಕೆಲಸ ಬಿಜೆಪಿಗೆ ಮುಜುಗರ ತರಬಾರದೆಂದು ರಾಜೀನಾಮೆ ಕೊಟ್ಟ ರಾಜಾ ಸಿಂಗ್; ಆ ಕೆಲಸ ಏನು ಗೊತ್ತಾ?

ತಮ್ಮ ವಿವಾದಿತ ಮಾತುಗಳು, ಭಾಷಣದ ಮೂಲಕವೇ ಸದಾ ಸುದ್ದಿಯಲ್ಲಿರುವ ಹೈದರಾಬಾದ್ನ ಬಿಜೆಪಿ ಶಾಸಕ ರಾಜಾ ಸಿಂಗ್ ಪಕ್ಷಕ್ಕೆ ನಾಲ್ಕು ದಿನಗಳ ಹಿಂದೆ ರಾಜೀನಾಮೆ ಸಲ್ಲಿಸಿದ್ದಾರೆ.

“ನಾನು ಮಾಡುಲು ಉದ್ದೇಶಿಸಿರುವ ಕಾರ್ಯ ಪಕ್ಷಕ್ಕೆ ಮುಜುಗರ ತರಬಾರದು ಎಂಬ ಕಾರಣಕ್ಕೆ ಅವರು ನಾನು ಪಕ್ಷ ಬಿಡುತ್ತಿದ್ದೇನೆ,” ಎಂದು ಅವರು ತಿಳಿಸಿದ್ದಾರೆ.

ತಾವು ಪಕ್ಷ ಬಿಡುತ್ತಿರುವುದರ ಹಿಂದಿನ ಕಾರಣಗಳನ್ನು ಶಾಸಕ ರಾಜಾ ಸಿಂಗ್ ತಮ್ಮ ರಾಜೀನಾಮೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಅದನ್ನೇ ಮಾಧ್ಯಮಗಳ ಎದುರು ಹೇಳಿರುವ ಅವರು, ” ಈ ಬಾರಿಯ ಈದ್ ಹಬ್ಬಕ್ಕೆ ಸಾಕಷ್ಟು ಗೋವುಗಳನ್ನು ವಧೆ ಮಾಡಲಾಗುತ್ತದೆ. ಇದನ್ನು ತಡೆಯುವ ಸಲುವಾಗಿ ನಾನು ಕಾರ್ಯಪ್ರವೃತ್ತನಾಗಬೇಕಾಗಿದೆ. ಧರ್ಮ ಮತ್ತು ಗೋವುಗಳ ರಕ್ಷಣೆಗಾಗಿ ನಾನು ಯಾವ ಹಂತಕ್ಕೆ ಬೇಕಾದರೂ ಹೋಗುತ್ತೇನೆ. ನನ್ನ ಈ ಕಾರ್ಯವನ್ನು ವಿರೋಧಿಸುವವರು ‘ನಿಮ್ಮ ಪಕ್ಷದವನು ಹೀಗೆ ಮಾಡಿದ, ಹಾಗೆ ಹೇಳಿದ ಎಂದೆಲ್ಲ ಮೋದಿ ಅವರನ್ನು ಟೀಕಿಸುತ್ತಾರೆ. ಹೀಗಾಗಿ ನನ್ನಿಂದ ಪಕ್ಷಕ್ಕೆ ಮತ್ತು ನಾಯಕರಿಗೆ ಮುಜುಗರ ಉಂಟಾಗಬಾರದು ಎಂದು ರಾಜೀನಾಮೆ ನೀಡಿದ್ದೇನೆ ಎಂದು ರಾಜಾ ಸಿಂಗ್ ತಿಳಿಸಿದ್ದಾರೆ.

ಈ ಬಾರಿಯ ಈದ್ಗೆ ಹೈದರಾಬಾದ್ನಲ್ಲಿ 3000 ಗೋವುಗಳನ್ನ ವಧೆ ಮಾಡಲಾಗುತ್ತಿದೆ ಎಂದು ರಾಜಾಸಿಂಗ್ ಇದೇ ವೇಳೆ ಆತಂಕ ವ್ಯಕ್ತಪಡಿಸಿದರು.

ಹೈದರಾಬಾದ್ನ ಗೋಶಾಮಾಹಲ್ ಕ್ಷೇತ್ರದ ಬಿಜೆಪಿ ಶಾಸಕರಾಗಿರುವ ರಾಜಾ ಸಿಂಗ್ ತಮ್ಮ ವಿವಾದಿತ ಮಾತುಗಳ ಮೂಲಕವೇ ಪ್ರಖ್ಯಾತಿ ಪಡೆದವರು. ಇತ್ತೀಚೆಗೆ ಅವರು “ದೇಶ ಬಿಡಲು ಸಿದ್ಧವಿಲ್ಲದ ಬಾಂಗ್ಲಾದವರನ್ನು ಗುಂಡಿಕ್ಕಿ,”ಎಂದಿದ್ದರು. ಅದಕ್ಕೂ ಹಿಂದೆ, ” ಸಂದರ್ಭ ಬಂದರೆ ಧರ್ಮ ವಿರೋಧಿಗಳ ತಲೆ ಕಡಿಯಬೇಕು,” ಎಂದು ಹೇಳಿಕೆ ನೀಡಿದ್ದರು.

ಕಳೆದ ವರ್ಷ ಡಿಸೆಂಬರ್ನಲ್ಲಿ ಯಾದಗಿರಿ ಜಿಲ್ಲೆಯಲ್ಲಿ ನಡೆದಿದ್ದ ವಿರಾಟ್ ಹಿಂದೂ ಸಮಾವೇಶದಲ್ಲಿ ಭಾಗವಹಿಸಿದ್ದ ರಾಜಾ ಸಿಂಗ್ ಕೋಮು ಪ್ರಚೋಧನಕಾರಿ ಭಾಷಣ ಮಾಡಿದ್ದರು. ಅವರ ವಿರುದ್ಧ ಯಾದಗಿರಿ ಜಿಲ್ಲಾಡಳಿತ ಪ್ರಕರಣ ದಾಖಲಿಸಿತ್ತು.
ಕಳೆದ ಎರಡು ವರ್ಷಗಳಲ್ಲಿ ರಾಜಾ ಸಿಂಗ್ ಬಿಜೆಪಿಗೆ ಮೂರನೇ ಬಾರಿ ರಾಜೀನಾಮೇ ಸಲ್ಲಿಸಿದ್ದಾರೆ. ಈ ಹಿಂದೆ ರಾಜೀನಾಮೆ ನೀಡಿದ್ದ ಅವರು ಕೆಲವೇ ದಿನಗಳಲ್ಲಿ ರಾಜೀನಾಮೆ ಹಿಂಪಡೆದಿದ್ದರು.

News Source

Leave a comment

Be the first to comment