ಕೇರಳ ನೆರೆಗೆ ಸಂಜು ಸ್ಯಾಮ್ಸನ್ ಕೊಟ್ಟ ಹಣ ಹದಿನೈದು ಲಕ್ಷ. ಸಚಿನ್ ತೆಂಡೂಲ್ಕರ್ ಕೊಟ್ಟ ಹಣ ಎಷ್ಟು?

ಶತಮಾನದ ಮಳೆ ಹಾಗೂ ಜಲಪ್ರಳಯಕ್ಕೆ ದೇವರ ನಾಡು ತತ್ತರಿಸಿದೆ. ಇಡೀ ರಾಜ್ಯ ಬಹುತೇಕ ಭಾಗಗಳು ಜಲಾವೃತಗೊಂಡಿದೆ. ಇದೀಗ ಪ್ರವಾಹ ಪೀಡಿತ ಕೇರಳಕ್ಕೆ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ನೆರವು ನೀಡಿದ್ದಾರೆ.

ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಪ್ರವಾಹ ಪೀಡಿತ ಕೇರಳಗೆ 10 ಲಕ್ಷ ರೂಪಾಯಿ ನೀಡಿದ್ದಾರೆ. ಈ ಮೂಲಕ ಸಚಿನ್ ಯಾರಿಗೂ ತಿಳಿಯದಂತೆ, ಯಾವುದೇ ಪ್ರಚಾರವಿಲ್ಲದೆ ಕೇರಳ ಜನತಗೆ ನೆರವಾಗಿದ್ದಾರೆ.

ಸಚಿನ್ 10 ಲಕ್ಷ ರೂಪಾಯಿ ನೆರವು ನೀಡಿರೋದು ಸಚಿನ್ ಅಭಿಮಾನಿಗಳ ಒಎಂಜಿ ಸಚಿನ್ ಬಳಗದ ಟ್ವೀಟ್ ಮೂಲಕ ಬಹಿರಂಗವಾಗಿದೆ. ಕೇರಳ ಪ್ರವಾಹಕ್ಕೆ ತುತ್ತಾದ ಸಂದರ್ಭದಲ್ಲೇ ಸಚಿನ್, ನೆರವು ನೀಡುವಂತೆ ಎಲ್ಲರಲ್ಲಿ ಮನವಿ ಮಾಡಿದ್ದರು. ಬಳಿಕ ತಾವೇ ಖುದ್ದಾಗಿ 10 ಲಕ್ಷ ನೀಡಿ ನೆರವಾಗಿದ್ದಾರೆ.

ಸಚಿನ್ ತೆಂಡೂಲ್ಕರ್ ಹಾಗೂ ಕೇರಳಗೆ ಅವಿನಾಭಾವ ಸಂಬಂಧವಿದೆ. ಇಂಡಿಯನ್ ಸೂಪರ್ ಲೀಗ್ ಫುಟ್ಬಾಲ್ ಟೂರ್ನಿಯಲ್ಲಿ ಸಚಿನ್ ಕೇರಳಾ ಬ್ಲಾಸ್ಟರ್ಸ್ ತಂಡದ ಮಾಲೀಕರಾಗಿದ್ದಾರೆ. ಕೋಟಿ ಕೋಟಿ ಸಂಪಾದಿಸುವ ಸಚಿನ್ ತೆಂಡೂಲ್ಕರ್‌ರಿಂದ ಕೇರಳ ಅಭಿಮಾನಿಗಳು ಹೆಚ್ಚಿನ ನಿರೀಕ್ಷೆ ಇಟ್ಟಿದ್ದಾರೆ.
ನ್ಯೂಸ್ ಸೋರ್ಸ್

Leave a comment

Be the first to comment